ನೀನಲ್ಲಿ ನಾನಿಲ್ಲಿ ನಡುವೆ ಮಿಡಿತಗಳ ಸೇತುವೆ . ನೂರಾರು ಒಲವಿನ ಜೊತೆಗೆ ತುಂಟತನದ ಮಾತಿವೆ . ಭಾವನೆಗಳು ಬದಿಯಲ್ಲಿ, ನೆನಪಿನ ಪಾಯ . ಅಬ್ಬಬ್ಬಾ ಈ ಪ್ರೀತಿ ಅದೆಷ್ಟು ಅಪಾಯ. - ಕವಿ ಕಾಣದ್ದು
ಓಡುತಿರುವರು ಎಲ್ಲ, ಗುರಿಮುಟ್ಟಿವುದಕ್ಕೆ ಅಲ್ಲ, ಉಳಿದವರನು ಹಿಂದಿಕ್ಕಲು. ಆಟ ಅವರದಲ್ಲ, ಗೆಲುವು ಬೇಕಿಲ್ಲ, ಮತ್ತೊಬ್ಬನನು ದಾಟಿ ಮುನ್ನುಗ್ಗಲು. ಸಣ್ಣ ಆಸೆಗಳು ಇವರನು ಕರೆಯುತ್ತಿದ್ದು, ಓಡುತಿಹರು ಎದ್ದು ಬಿದ್ದು, ತಾವು ನಡೆಯಬೇಕಿದ್ದ ದಾರಿಯೇ ಮರೆತರಲ್ಲ. ಇದ್ದರೂ ವಿಶ್ವಕ್ಕೆ ಒಬ್ಬನಾಗುವ ಶಕ್ತಿ, ಹತ್ತರಲಿ ಮೊದಲಾಗುವುದೇ ಸೂಕ್ತಿ, ಬಲ್ಲವರೂ ಓಟದಿಂದ ಹೊರಬರಲಾದರಲ್ಲ.