Skip to main content

ಓಟ

ಓಡುತಿರುವರು ಎಲ್ಲ, ಗುರಿಮುಟ್ಟಿವುದಕ್ಕೆ ಅಲ್ಲ,
ಉಳಿದವರನು ಹಿಂದಿಕ್ಕಲು.

ಆಟ ಅವರದಲ್ಲ, ಗೆಲುವು ಬೇಕಿಲ್ಲ,
ಮತ್ತೊಬ್ಬನನು ದಾಟಿ ಮುನ್ನುಗ್ಗಲು.

ಸಣ್ಣ ಆಸೆಗಳು ಇವರನು ಕರೆಯುತ್ತಿದ್ದು, ಓಡುತಿಹರು ಎದ್ದು ಬಿದ್ದು,
ತಾವು ನಡೆಯಬೇಕಿದ್ದ ದಾರಿಯೇ ಮರೆತರಲ್ಲ.

ಇದ್ದರೂ ವಿಶ್ವಕ್ಕೆ ಒಬ್ಬನಾಗುವ ಶಕ್ತಿ, ಹತ್ತರಲಿ ಮೊದಲಾಗುವುದೇ ಸೂಕ್ತಿ,
ಬಲ್ಲವರೂ ಓಟದಿಂದ ಹೊರಬರಲಾದರಲ್ಲ.

Comments

Popular posts from this blog

ಘಳಿಗೆ

ಮರಳಿ ಮಣ್ಣಿಗೆ ಹೋಗುವ ಘಳಿಗೆ ನೆರಳಿನ ಚಿಂತೆ ಏತಕೆ, ಸ ಸುಖಪುರುಷ ಅಪುರುಷರ ಭೇದವಿಲ್ಲ ಮಸಣಕೆ - ಕವಿ ಕಾಣದ್ದು.

ದರ್ಪ

ದರ್ಪವೆಂಬುದು ಬರಿಗೈಯಲಿಡಿದ ಸರ್ಪದಂತೆ. ದರ್ಪವಿಡಿದು ಬರಲು ಜನರು ಓಡಿದರು ನಿನ್ನ ನೋಡುತಲಿ, ನಿನಗೆಂದು ಅರಿವಾಗುದು ಅದಕೆ ನೀನೇ ಮೊದಲು ಬಲಿ. - ಕವಿ ಕಾಣದ್ದು.